Home ಸುದ್ದಿ ಅಂತರಾಷ್ಟ್ರೀಯ ಜೀವವೈವಿದ್ಯತೆ ದಿನಾಚರಣೆಯಲ್ಲಿ ಪ್ರೊ ಜಿ. ಎಂ. ವಿದ್ಯಾಸಾಗರ ಅಭಿಪ್ರಾಯ
ಸುದ್ದಿ

ಅಂತರಾಷ್ಟ್ರೀಯ ಜೀವವೈವಿದ್ಯತೆ ದಿನಾಚರಣೆಯಲ್ಲಿ ಪ್ರೊ ಜಿ. ಎಂ. ವಿದ್ಯಾಸಾಗರ ಅಭಿಪ್ರಾಯ

Share
Share

 

* ವಿದ್ಯಾರ್ಥಿಗಳು ಪರಿಸರ, ಜೀವ ಸಂಕುಲ ಸಂರಕ್ಷಣೆಯ                        ರೂವಾರಿಗಳು

ಮರ್ಚೆಡ್  ಡೇಸ್ ಸುದ್ದಿ.

ಕಲಬುರಗಿ: ವಿದ್ಯಾರ್ಥಿಗಳು ಪರಿಸರ ಮತ್ತು ಜೀವ ಸಂಕುಲ ಸಂರಕ್ಷಣೆಯ ರೂವಾರಿಗಳಾಗಬೇಕು, ಜೀವವೈವಿದ್ಯತೆ ದಿನಾಚರಣೆ ಕೇವಲ ಆಚರಣೆಯ ದಿನಗಳಿಗೆ ಸೀಮಿತವಾಗದೆ ವರ್ಷವಿಡಿ ಪರಿಸರ ರಕ್ಷಣೆ ಮತ್ತು ಜೀವಿಗಳ ಸಂರಕ್ಷಣೆಯಲ್ಲಿ ಕ್ರಿಯಾಶೀಲತೆ ತೋರಬೇಕು ಎಂದು ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕ ಪ್ರೊ ಜಿ. ಎಂ. ವಿದ್ಯಾಸಾಗರ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮತ್ತು ಪ್ರಾಣಿಶಾಸ್ತ್ರ ಸಂಘದ ನೇತೃತ್ವದಲ್ಲಿ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಜೀವವೈವಿದ್ಯತೆ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜೀವವೈವಿದ್ಯತೆಯಲ್ಲಿ ಆಸಕ್ತಿದಾಯಕ ವಿಸ್ಮಯಗಳಿವೆ. ಅವುಗಳ ಕುರಿತು ವೈಜ್ಞಾನಿಕ ಚಿಂತನೆ ಮೂಲಕ ದೂರದೃಷ್ಠಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೀಟಗಳು ಮಾನವನ ಆಹಾರ ಪದ್ಧತಿಯ ಮುಖ್ಯ ಭಾಗವಾಗಬಹುದು. ಮಾನವ ಕಲ್ಯಾಣಕ್ಕಾಗಿ ಆರೋಗ್ಯದಾಯಕ ಪರಿಸರ ಮತ್ತು ಜೀವ ವೈವಿಧ್ಯತೆಯನ್ನು ಪೋಷಿಸಬೇಕು ಎಂದರು.

ಪ್ರಾಣಿಶಾಸ್ತ್ರ ಸಂಘದ ಉಪಾಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ಶಶಿಕಾಂತ ಮಜಗಿ ಪ್ರಾಸ್ತಾವಿಕ ಮಾತನಾಡಿ ‘ಆಕ್ಟಿಂಗ್ ಲೋಕಲೀ ಫಾರ್ ಗ್ಲೋಬಲ್ ಇಂಪ್ಯಾಕ್ಟ್’ ಜೀವವೈವಿದ್ಯತೆ ದಿನಾಚರಣೆ ಘೋಷ ವಾಕ್ಯವಾಗಿದೆ. ಜೀವ ವಿಜ್ಞಾನ ಜಗತ್ತು ವೈವಿಧ್ಯತೆಯಿಂದ ಕೂಡಿದೆ. ಜೀವಿಗಳ ವಂಶವಾಹಿ ಮತ್ತು ಪರಿಸರದಲ್ಲಿ ಪ್ರಾಣಿ, ಪಕ್ಷಿ, ಸಸ್ಯ ಮತ್ತು ಸೂಕ್ಷ್ಮ ಜೀವಿಗಳು ಸೊಗಸಾದ ಜಗತ್ತನ್ನು ಸೃಷ್ಟಿಸಿವೆ. ಎಲ್ಲಾ ಜೀವರಾಶಿಗಳಲ್ಲಿ ವೈವಿಧ್ಯತೆ ಕಾಣದಿದ್ದರೆ ಭೂಮಿ ಸುಂದರ ಮತ್ತು ವಿಸ್ಮಯಗಳ ಅಗರವಾಗಿರುತ್ತಿರಲಿಲ್ಲ. ಜೈವಿಕ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳಿಂದ ಸುಮಾರು 1.6 ರಿಂದ 1.8 ಮಿಲಿಯನಷ್ಟು ಜೀವಿಗಳನ್ನು ಮಾತ್ರ ಗರುರುತಿಸಲು ಸಾದ್ಯವಾಗಿದೆ. ಇನ್ನು 45 ರಿಂದ 50 ಮಿಲಿಯನಷ್ಟು ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮ ಜೀವಿಗಳು ಇವೇ ಎಂದು ಇತ್ತೀಚಿನ ಶೋಧನೆಗಳಿಂದ ತಿಳಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಅವುಗಳ ವಿಶೇಷತೆ, ವೈವಿಧ್ಯತೆಗಳನ್ನು ಗ್ರಹಿಸುವ ಮೂಲಕ ನಾವೀನ್ಯ ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಣಿಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಸಂಧ್ಯಾ ದಿವಾಕರ ವೈವಿಧ್ಯತೆಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಜೀವವೈವಿಧತೆ ಕುರಿತು ಬಾಷಣ ಸ್ಪರ್ಧೆ ಆಯೊಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರಾದ ಪ್ರೊ. ವಿಜಯಕುಮಾರ ಮಲಶೆಟ್ಟಿ, ಡಾ. ಶರಣಬಸಪ್ಪ ಪಾಟಿಲ, ಡಾ. ಪರಶುರಾಮ ಕಾಂಬಳೆ ಮತ್ತು ಡಾ. ಖಸಿಮ ಫಾತಿಮಾ ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕು. ಮಾಯಾವತಿ ಕಾರ್ಯಕ್ರಮ ನಿರೂಪಿಸಿದರು. ಭಾಗಪ್ಪ ಪ್ರಾರ್ಥಿಸಿದರು. ಶಿವಾನಿ ಸ್ವಾಗತಿಸಿದರು. ಭಾಗ್ಯಶ್ರಿ ವಂದಿಸಿದರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...