ಮರ್ಚೆಡ್ ಡೇಸ್ ವರದಿ.
ಹಗಲು ಆಫೀಸ್, ರಾತ್ರಿ ಬೈಕ್ ಟ್ಯಾಕ್ಸಿ! ಜೊತೆಗೆ ಪಿ ಎಚ್ ಡಿ. ಅಡುಗೆ! ‘ಟೈಮೇ ಸಿಗ್ತಿಲ್ಲರಿ’ ಅನ್ನೋರು ಈ ಯುವಕನ ಕತೆ ಓದಿ…
ಬೆಂಗಳೂರು: “ಅಬ್ಬಾ.. ದಿನಕ್ಕೆ ಒಂದೇ ಶಿಫ್ಟ್ ಕೆಲಸ ಮಾಡಿದ್ರೂ ಸಾಕು, ಜೀವ ಹೈರಾಣಾಗಿ ಹೋಗುತ್ತೆ! ಅದೂ ಇದೂ ಅಂತಾ ಯಾವುದಕ್ಕೂ ಟೈಮೇ ಸಿಗಲ್ಲಪ್ಪ…” ಹೀಗೆ ದಿನದ 24 ಗಂಟೆಯೂ ಸಮಯದ ಕೊರತೆಯ ಬಗ್ಗೆ ದೂರುವವರೇ ನಮ್ಮ ಸುತ್ತಮುತ್ತ ಹೆಚ್ಚು. ಆದರೆ, ಮನಸ್ಸು ಮಾಡಿದರೆ ದಿನದ ಅಷ್ಟೂ ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಬ್ಬ ಯುವಕ ಜ್ವಲಂತ ಉದಾಹರಣೆಯಾಗಿ ನಿಂತಿದ್ದಾನೆ.
ಬೆಳಗ್ಗೆಯಿಂದ ಸಂಜೆವರೆಗೆ ಆಫೀಸ್ ಕೆಲಸ, ರಾತ್ರಿ ಹೊತ್ತು ಬೈಕ್ ಟ್ಯಾಕ್ಸಿ ಡ್ರೈವರ್, ಇದರ ಜೊತೆಗೆ ಪಿಎಚ್ಡಿ ವ್ಯಾಸಂಗ, ಸ್ವತಃ ಅಡುಗೆ, ವಿಡಿಯೋ ಎಡಿಟಿಂಗ್, ಕಂಟೆಂಟ್ ಕ್ರಿಯೇಷನ್! ಹೀಗೆ ಒಂದೇ ಸಮನೆ ಹಲವು ಕೆಲಸಗಳನ್ನು ಮಾಡುತ್ತಾ ಇಂಟರ್ನೆಟ್ ಲೋಕದಲ್ಲಿ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾನೆ ಈ ಸೂಪರ್ ಮ್ಯಾನ್!
ಇಷ್ಟೆಲ್ಲಾ ಸವಾಲುಗಳನ್ನು ಒಟ್ಟಿಗೆ ನಿಭಾಯಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಯುವಕನ ಹೆಸರು ದೀಪಕ್ ಪಾಂಡೆ ದೀಪಕ್ ಪಾಂಡ್ಯ. ಈತ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಲಕ್ಷಾಂತರ ಜನರ ಹುಬ್ಬೇರಿಸುವಂತೆ ಮಾಡಿದೆ. ಒಂದೇ ಕೆಲಸಕ್ಕೆ ಸುಸ್ತಾಗುವ ಇಂದಿನ ಜನರ ಮಧ್ಯೆ, ದೀಪಕ್ ದಿನವೊಂದರಲ್ಲಿ ಬರೋಬ್ಬರಿ ಒಂಭತ್ತಕ್ಕೂ ಹೆಚ್ಚು ಕೆಲಸಗಳನ್ನು ಒಟ್ಟಿಗೆ ಮ್ಯಾನೇಜ್ ಮಾಡುತ್ತಿದ್ದಾನೆ!
ಬೆಳಗ್ಗೆ 9 ರಿಂದ ಸಂಜೆ 5: ಕಚೇರಿಯಲ್ಲಿ ರೆಗ್ಯುಲರ್ ಆಫೀಸ್ ಕೆಲಸ.
ಸಂಜೆ 5 ರಿಂದ ರಾತ್ರಿ 11: ಆಫೀಸ್ ಮುಗಿಸಿ ಸುಮ್ಮನೆ ಕೂರದೆ, ಬೈಕ್ ಏರಿ ಬೈಕ್ ಟ್ಯಾಕ್ಸಿ ರೈಡರ್ ಆಗಿ ಕೆಲಸ.
ರಾತ್ರಿ ನಂತರ: ಹಸಿವಾದಾಗ ಹೊರಗಡೆ ಆರ್ಡರ್ ಮಾಡದೇ ಮೂರು ಹೊತ್ತು ತಾನೇ ಸ್ವತಃ ಅಡುಗೆ ಮಾಡಿಕೊಳ್ಳುತ್ತಾನೆ.
ಇಷ್ಟೇ ಅಲ್ಲದೆ: ಇದರ ಮಧ್ಯೆಯೇ ಸಮಯ ಹೊಂದಿಸಿಕೊಂಡು ಹಠ ಬಿಡದೇ ಪಿಎಚ್ಡಿ ಮಾಡುತ್ತಿದ್ದಾನೆ. ಹಾಗೂ ವಿಡಿಯೋ ಎಡಿಟಿಂಗ್ ಕಲ್ತು ಕಂಟೆಂಟ್ ಕ್ರಿಯೇಟರ್ ಆಗಿಯೂ ಗುರುತಿಸಿಕೊಂಡಿದ್ದಾನೆ.
“ಆ ಖುಷಿಯಾಗಿರೋ ವ್ಯಕ್ತಿ ಬೇರೆ ಯಾರೂ ಅಲ್ಲ, ನಾನೇ!”
“ಮೊದಲು ನನಗೂ ದಿನದ ಕೆಲಸ ಮುಗಿದ ಮೇಲೆ ಬೇರೆ ಯಾವುದಕ್ಕೂ ಎನರ್ಜಿಯೇ ಇರುತ್ತಿರಲಿಲ್ಲ. ಜೀವನದಲ್ಲಿ ಖುಷಿಯೇ ಇಲ್ಲದೆ ಬದುಕುತ್ತಿದ್ದೆ. ಆದರೆ ಈಗ ನಾನು ದಿನಕ್ಕೆ ಇಷ್ಟೆಲ್ಲಾ ಕೆಲಸ ಮಾಡಿದ್ರೂ ತುಂಬಾ ಖುಷಿಯಾಗಿದ್ದೇನೆ. ಅದಕ್ಕೆ ಕಾರಣ, ನನ್ನ ಜೀವನದಲ್ಲಿ ಮೊದಲ ಬಾರಿಗೆ ನನ್ನಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಎಂಬುದು ನನಗೇ ಅರಿವಾಯಿತು” ಎಂದು ದೀಪಕ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನ
ನಾಲ್ಕು ಜನ ಏನು ಅಂದುಕೊಳ್ಳುತ್ತಾರೋ?”, “ನನ್ನಿಂದ ಈ ಕೆಲಸ ಸಾಧ್ಯವಿಲ್ಲ”, ಅಥವಾ “ಹೊಸದಾಗಿ ಏನಾದರೂ ಮಾಡಬೇಕೆಂದರೆ ಈಗ ಇರೋ ಕೆಲಸ ಬಿಡಬೇಕೇನೋ” ಎಂಬ ಭಯದಿಂದ ದೀಪಕ್ ಮೊದಲು ಹಿಂಜರಿಯುತ್ತಿದ್ದನಂತೆ. ಆದರೆ ನಿಧಾನವಾಗಿ ಬದಲಾಗಲು ನಿರ್ಧರಿಸಿದ ಆತ, ಮೊದಲು ಪಿಎಚ್ಡಿಗೆ ಸೇರಿದ. ನಂತರ ಬೈಕ್ ಟ್ಯಾಕ್ಸಿ ಓಡಿಸಲು ಆರಂಭಿಸಿದ. ಆಮೇಲೆ ಕಂಟೆಂಟ್ ಕ್ರಿಯೇಷನ್ಗೂ ಕಾಲಿಟ್ಟ. ಇವೆಲ್ಲವೂ ಆತನಲ್ಲಿ “ನಾನು ಏನನ್ನಾದರೂ ಸಾಧಿಸಬಲ್ಲೆ” ಎಂಬ ಆತ್ಮವಿಶ್ವಾಸವನ್ನು ತುಂಬಿವೆ.
ದೀಪಕ್ ಪಾಂಡೆ ಅವರ ಈ ಸ್ಫೂರ್ತಿದಾಯಕ ವಿಡಿಯೋ ಪೋಸ್ಟ್ಗೆ ಇನ್ಸ್ಟಾಗ್ರಾಮ್ನಲ್ಲಿ ಲೈಕ್ಸ್ ಹಾಗೂ ಕಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ನೀವು ನಿಜಕ್ಕೂ ನಮಗೆ ಪ್ರೇರಣೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.